Thursday 2 June 2011

ನನ್ನ ಪ್ರೀತಿ - ನನ್ನ ಗುರು


ಹುಟ್ಟಿನಿಂದ ಇಂದಿನ ವರೆಗೆ ನಾ ಕಾಯುತಲಿದ್ದೆ ನನ್ನ ಪ್ರೀತಿಯ ಪಡೆಯಲು ,  ಎಲ್ಲಾದರೂ ಸಿಗಬಹುದೇ ಎಂದು ಶುರುಮಾಡಿದೆ ನಾ ಹುಡುಕಲು.  ಬದುಕೆಂಬ ಸಾಗರದಲ್ಲಿ ಈಜುತ್ತಾ ಪ್ರೀತಿ ಎಂಬ ಮುತ್ತಿಗಾಗಿ ಅಲೆಯುತ್ತ ಬಹುಹೊತ್ತು  ಹಿಡಿಯಿತು  ನಿಟ್ಟೆ  ಎಂಬ ದಾರಿಯಿಂದ ಮಂಗಳೂರು ಎಂಬ ದಡವ ಸೇರಲು ;  ಅಲ್ಲಿ ಕೈ ಚಾಚಿ ಕಾಯುತಲಿದ್ದರು ಹಲವರು ನಾ ಹುಡುಕುವ ಮುತ್ತನ್ನು ನನಗೆ ದೊರಕಿಸಲು. ಅನುಮಾನಿಸಿದೆ, ಅವಲೋಕಿಸಿದೆ ಕೊನೆಯಲ್ಲಿ ಅವರೆಲ್ಲರ ಮಾತಿಗೆ ಒಪ್ಪಿದೆ. 

ಹಲವು ಬಾರಿ ಅವರು ತೋರಿಸಿದರು ನಾನೇ ನೀ ಹುಡುಕುವ ಪ್ರೀತಿ ಎಂದು, ಕೇವಲ ಆಕರ್ಷಣೆ ಉಂಟಾಯಿತೇ ಹೊರತು ಪ್ರೀತಿ ಮೂಡಲಿಲ್ಲಾ. ಅಷ್ಟಕ್ಕೇ ತಮ್ಮ ಯತ್ನವ ನಿಲ್ಲಿಸದ ಮಂಗಳೂರ ಜನ ' ಜೀವನ ಕಲೆ '  ಯಲ್ಲಿ ಸೇರಿಸಿ ಸುದರ್ಶನ ಕ್ರೀಯೆ ಎಂಬ ಚಕ್ರದಲ್ಲಿ ಕೂಡಿಸಿ ಪ್ರೀತಿ ಯನ್ನು ಮೂಡಿಸಿ ಆನಂದದಲ್ಲಿ ತೇಲಿಸಿದರು. ನಂತರ  ನನ್ನ ಹಿಂದಿನ ಬದುಕೆಲ್ಲಾ ಇತಿಹಾಸ ವಾಗಿ, ನಂತರದ ದಿನಗಳೆಲ್ಲಾ ಕೇವಲ ಹೂವಾಗಿ ನನ್ನ ಬಾಳನ್ನೇ ಬದಲಿಸಿತು. ದೈಹಿಕವಾಗಿ, ಮಾನಸಿಕವಾಗಿ ಹಾರುವ ಹಕ್ಕಿಯಾದೆ, ಹರುಷದ ಹೊನಲಾದೆ.. ಒಟ್ಟಿನಲ್ಲಿ ನಾ ಬದಲಾದೆ :) 

ಸಿಕ್ಕ ನಂತರ ನನ್ನ ಗುರು , ಗಟ್ಟಿಯಾಯಿತು ನಮ್ಮ ಪ್ರೀತಿಯ ಬೇರು ; ಮರೆತೆ ನಾ ಯಾವುದು ನನ್ನಯ ಊರು, ಸಕಲವೂ ಆಗಿ ಹೋಯಿತು ಈ ನನ್ನ ಮಂಗಳೂರು;

ಪ್ರೀತಿ ಕುರುಡು ಎಂದು ಹೇಳುತ್ತಾರೆ ಆದರೆ ಇಲ್ಲಿ ನನ್ನ ಕುರುಡು ಬಾಳಿಗೆ ಪ್ರೀತಿ ಬೆಳಕ ನೀಡಿತು. ಪ್ರೀತಿ ಯಲ್ಲಿ ನಾ ಮುಳಗಲಿಲ್ಲಾ, ಪ್ರೀತಿ ಕೊಡುವ ನೋವಲ್ಲಿ ನಾ ತೇಲಲಿಲ್ಲಾ ; ನನ್ನ ಮನದ ಕೊಳಕಿನಿಂದ ಮೇಲೆ ಬಂದೆ, ಜ್ಞಾನವೆಂಬ ದೋಣಿಯಲ್ಲಿ ನೋವಿನಿಂದ ದಾಟಿ ಬಂದೆ. 

ತೋರುವರು  ಪ್ರೀತಿ , ಕಲಿಸುವರು ಬದುಕುವ ರೀತಿ -  ಜೊತೆಗೆ ಸ್ವಲ್ಪ ನೀತಿ ; ಇಂತಹ ಪ್ರೀತಿಯ ಕಾಣುವಿರಿ ಕೇವಲ ನಮ್ಮ ಗುರೂಜಿ ಶ್ರೀ ಶ್ರೀ ಯವರ ಕಣ್ಣಲ್ಲಿ, ಪೂರ್ವ ಜನ್ಮದ ಪುಣ್ಯವೇ ಇರಬೇಕು ಸಿಕ್ಕಿತು ಆ ಪ್ರೀತಿ ನಾ ಸೇರುವ ಮುಂಚೆ ಮಣ್ಣಲ್ಲಿ. 

 ಅವರೇ ನಮ್ಮ  ಗುರೂಜಿ, ಅವರೇ ನಮ್ಮ ಶ್ರೀ ಶ್ರೀ ರವಿ ಶಂಕರಜೀ
 

  


Monday 30 May 2011

ಆಟ - ಪಾಠ

                                                 ಬದಲಾಗುವುದು ದ್ವೇಷದ ನೋಟ,
                                                 ಕಲಿಯುವೆವು ಬದುಕಲು ಆಡಿಕೊಂಡು ಆಟ,
                                                 ಮನಸಿನ ವಿಕಾರಗಳು ನಿಲ್ಲಿಸುವುದು ಕೊಡುವುದ ಕಾಟ,
                                                 ಈ ಜೀವನ ಕಲೆಯಿಂದ ಇನ್ನೂ ಕಲಿಯುವುದಿದೆ ತುಂಬಾ ಪಾಠ. 



ಒಂದೇ ದಾರಿ

                                       ಹಲವು ರೂಪವ ತಾಳಿ ಬರುವವು ಕಷ್ಟಗಳು ಬಾರಿ ಬಾರಿ,
                                       ಸೋತು ಹೋದೆನೆಂದು ಹೇಳಬಹುದು ಮನವು ಎಷ್ಟೋ ಸಾರಿ,
                                       ಏನೇ ಆದರೂ ಎಲ್ಲದಕೂ ' ಸುದರ್ಶನ ಕ್ರೀಯೆಯೊಂದೇ ದಾರಿ.

ಬೋಧನೆ - ನಿವೇದನೆ

                                    ಪ್ರೀತಿಯ ಗುರೂಜಿ,
                                                  ಬದುಕಲ್ಲಿ ಮಾಡುವುದಿದೆ ಬಹಳಷ್ಟು ಸಾಧನೆ,
                                                  ದಾರಿಯುದ್ದಕ್ಕೂ ಬೇಕು ನಮಗೆ ನಿಮ್ಮಯ ಭೋದನೆ ; 
                                                  ಆಸರೆಯಾಗಿ ಸಾಂತ್ವಾನವ ನೀಡಿ ಆದಾಗ ವೇದನೆ,
                                                  ಸದಾ ನಮ್ಮ ಜೊತೆಯಾಗಿರಿ ಎನ್ನುವುದೇ ನಮ್ಮ ನಿವೇದನೆ.


ತಂಗಾಳಿಯಾದ ಬಿರುಗಾಳಿ

                                  ಗುರೂಜಿ,
                                              ಬದುಕೆಂಬ ನಾವೆಗೆ ಬಡಿಯುತಲಿತ್ತು ಬಿರುಗಾಳಿ,
                                              ಕಾಣುತಲಿತ್ತು ಕೇವಲ ಕಷ್ಟ - ನಷ್ಟಗಳದೇ ಹಾವಳಿ;
                                              ನಿಮ್ಮ ಪ್ರೀತಿಯ ತೆಕ್ಕೆಯಲಿ ಸೇರಿ ತಾಕಿದಂತಾಗುತಿದೆ ಈಗ ತಂಗಾಳಿ,
                                              ಬಿಚ್ಚಿ ಹೋದಂತಾಗಿದೆ ಬಾದೆ-ಬಂಧನಗಳೆಲ್ಲದರ ಸರಪಳಿ.




ಸ್ವಾಮೀಜಿ - ಗುರೂಜಿ

ಧರ್ಮಕ್ಕೊಬ್ಬರು ಹುಟ್ಟುವರು ಇಲ್ಲಿ ಸ್ವಾಮಿಜಿ,
           ಆದರೆ ಎಲ್ಲರಿಗೆಂದೇ ಬಾಳುತಿರುವರು ನಮ್ಮ ಗುರೂಜಿ;
                     ಗುರುತತ್ವದ ಬೆಲೆಯ ಕಲಿಸಿ ತೋರಿಸಿದರು ನಮ್ಮ ಬಗ್ಗೆ ಕಾಳಜಿ,
                                  ಬರುಡಾದ ಎಷ್ಟೋ ಬಾಳಲ್ಲಿ ಮತ್ತೆ ಪುಟಿಸುತಿಹರು ಉತ್ಸಾಹದ ಕಾರಂಜಿ.    




Sunday 22 May 2011

ಮಮತೆಯ ಕರೆ


                                        ಗುರೂಜಿ,                                   
                                                         ಕಣ್ಣಲ್ಲಿ ತುಂಬಿತ್ತು ನಿಮ್ಮ ಕಾಣಬೇಕೆಂಬ ಕಾತುರ,
                                                         ಮನಸು ಮಾಡಿತು ನಿಮ್ಮ ನೋಡಲೇ ಬೇಕೆಂಬ  ಆತುರ; 
                                          ಇಂದು ಇಲ್ಲಿಗೆ ಕರೆಸಿ,
                                          ಎಲ್ಲಾ ದುಃಖವ ಮರೆಸಿ,
                                          ಪ್ರೀತಿಯಿಂದ ನನ್ನನ್ನು  ಹರೆಸಿ;
                                                         ಮಾಡಿದಿರಿ ನನ್ನ ಕನಸನ್ನು ನನಸು,
                                                         ಸಂತಸದಲ್ಲಿ ತೇಲಿಸಿದಿರಿ ಈ ನನ್ನ ಮನಸು;  


Thursday 19 May 2011

ಗುರುವಿನ ಪ್ರೀತಿ ( Divine Love)

                        
                              ಗುರೂಜಿ,
                                        ನಾ ಹೇಳಲಾರೆ  ನೀವು ಮಾಡುತಿರುವಿರಿ  ಉಪಕಾರ, 
                                        ಕಷ್ಟದಲ್ಲಿ ನೀಡುತಿರುವಿರಿ  ಸಹಕಾರ ;
                                        ನಾ ಬಲ್ಲೆ ನೀವಿಲ್ಲಿ  ತೋರುತಿಹುದು  ಕೇವಲ ಗುರುವಿಗೆ 
                                        ಶಿಷ್ಯನ ಮೇಲಿರುವ ಮಮಕಾರ :) 

Meaning:  Guruji, I can't say you are doing a favour, you are helping us when we are in trouble ; Because, I know that here you are just showing the 'Love' of Master towards his devotees.