Monday, 16 April 2012

ನೀವು ಮತ್ತು ನಿಮ್ಮ ಕ್ರೀಂ :)


ಅಬ್ಬಾ !! ಕಾಲು ಹೊರಗಿಟ್ಟರೆ ಸಾಕು ಉರಿ ಬಿಸಿಲು. " ನನ್ನ ಚರ್ಮ ಮೊದಲೇ ಸೂಕ್ಷ್ಮ  ಆಯ್ತ್  ಬೇಸಿಗೆ ಮುಗಿವಾಗ ಸುಟ್ಟ ಬದನೆ ಕಾಯಿ ಆಗಿರುತ್ತೆ ಅಂತ ಹೇಳಿಕೊಳ್ಳುತ್ತಾ  ಪ್ರತಿ ದಿನದಂತೆ ತಲೆ ಮೇಲೆ ಶಾಲನ್ನು ಹೊದ್ದುಕೊಂಡು Sunscreen lotion ತಗೋಬೇಕು ಅಯ್ಯೋ ಯಾರ್ ತಗೋತಾರೆ center ಅಥವಾ ಮಂಗಳೂರಿಗೆ ಹೋದಾಗ ತಂದರಾಯಿತು" ಅಂತ ಯಾವಾಗಲು dialogue ಹೊಡಿಯೋದು, ಆದರೆ ಹೋದಾಗ ಮಾತ್ರ  next time ತಗೊಂಡ್ರೆ ಆಯ್ತ್ ಅಂತ ಮುಂದುಡೋದು , ಹೀಗೆ ನಡೆದಿತ್ತು ದಿನಗಳು :)

ಆದರೆ... ಇದೇ ಮೊನ್ನೆ ಶನಿವಾರ ಉಡುಪಿಯಲ್ಲಿ ಶಿಬಿರದ ಕೊನೆ ದಿನದಂದು ಸೇವೆ ಮಾಡುವಾಗ ಉಡುಗೊರೆ ಬದಲಾವಣೆಗೆ ನಾ ಸೇರಿಕೊಂಡೆ. ಕೊನೆಯಲ್ಲಿ ನನಗೆ ಉಡುಗೊರೆ ಸಿಕ್ಕಾಗ ಒಳಗೆ ಏನಿದೆ ಎಂಬ ಕುತೂಹಲ... ಬಡ ಬಡ ಉದಯ ಅಣ್ಣ ನ ಮುಂದೆ ಕೂತು gift  cover ಅನ್ನು ಸಾವಕಾಶವಾಗಿ ಬಿಚ್ಚಿ - ಬೆಚ್ಚಿ ಬಿದ್ದೆ ಮಾರಾಯ್ರೆ :D

ಎಂತ ಹೇಳೋದು ನಮ್ಮ HERO  ನ ಕರಾಮತ್ತು !!! ಆ gift cover ಒಳಗೆ Sunscreen Lotion ಇಟ್ಟು ಕೊಡೋದಾ..!!! ಆ ಕ್ಷಣದ ಭಾವನೆಯನ್ನು  ಒಂದೇ ಶಬ್ದ  ದಲ್ಲಿ  ಹೇಳೋಕ್ಕೆ ನನಗೆ ಗೊತ್ತಾಗ್ತಾ ಇಲ್ಲಾ ಮಾರಾಯ್ರೆ , ನಿಮಗೆ ಏನಾದ್ರು ಗೊತ್ತಾದ್ರೆ ನನಗೆ ಹೇಳಿ ಆಯ್ತಾ ;) :)

ಅಲ್ಲಿವರೆಗೆ ಮತ್ತೆ  ಸಿಗೋಣ,
 ಸಂಘ ಚ್ಚದ್ವಂ
ಜೈ ಗುರುದೇವ್
:)

Monday, 13 February 2012

ಜನ್ಮ ದಿನದ ಕೊಡುಗೆ

ಸದಾ ನನ್ನೊಡನಿರಬೇಕೆಂದು ನಾ ನಿನ್ನ ಬೇಡಿದೆ,
ತಡ ಮಾಡದೆ ಆಸೆಯ ನೀಗಿಸೆಂದು ನಾ ನಿನ್ನ ಕಾಡಿದೆ,
ಉತ್ತರವಾಗಿ ಧ್ಯಾನಕ್ಕೆ ನೀ ನನ್ನ ಕೂಡಿಸಿದೆ,
ನಿನ್ನೊಳಗೆಯೇ ನಾನಿರುವೆನೆಂದು ನನಗೆ ನೀ ತೋರಿಸಿದೆ, 
ಅರಿವ ಮೂಡಿಸಿ ಎಲ್ಲ ಕೋಪ-ತಾಪ, ದುಃಖ ಕಷ್ಟಗಳ ಮರೆಸಿದೆ,
ಬೆಲೆಯಿರದ ಚಿಂತೆ ಸಂತೆಗಳ ಮನದಿಂದ ನೀ ಸರಿಸಿದೆ,
ಎಂದಿನಂತೆ ಮತ್ತೆ ಜೀವನ ಕಲೆ ಪಾಠವ ನನಗೆ ನೀ ಕಲಿಸಿದೆ,
ನೀವೊಂದಿದ್ದರೆ ಕಣ್ಣಮುಚ್ಚಿ ಎಲ್ಲೆಲ್ಲೂ ನಾ ನಡೆಯಬಲ್ಲೆ ಎಂಬುದ ನನಗೆ ನೆನಪಿಸಿದೆ,
ಅಂತೂ ಜನ್ಮದಿನಕೆ ಒಳ್ಳೆ ಕೊಡುಗೆಯನ್ನೇ  ನೀ ನನಗೆ ನೀಡಿದೆ.


--  ಉನ್ನತ ಧ್ಯಾನ ಶಿಬಿರದಲ್ಲಿ ನನ್ನ ಜನ್ಮ ದಿನದಂದು ( ಜನವರಿ ೨೮) ಹರಿ ಓಂ ಧ್ಯಾನ ಮಾಡುವಾಗ 
ಮೂಡಿಬಂದ ಕೆಲ ಸಾಲುಗಳು.